32.5 C
ಮಂಗಳೂರು
September 18, 2026
Bhakthi News

ನರಹರಿ ಸದಾಶಿವ ದೇವಸ್ಥಾನದಲ್ಲಿ ಆಟಿ ಅಮಾವಾಸ್ಯೆಯ ವಿಶೇಷ ತೀರ್ಥಸ್ನಾನ: ಕೇರಳ, ತಮಿಳುನಾಡಿನಿಂದಲೂ ಭಕ್ತರ ದಂಡು

ನರಹರಿ ಸದಾಶಿವ ದೇವಸ್ಥಾನದಲ್ಲಿ ಆಟಿ ಅಮಾವಾಸ್ಯೆಯ ವಿಶೇಷ ತೀರ್ಥಸ್ನಾನ: ಕೇರಳ, ತಮಿಳುನಾಡಿನಿಂದಲೂ ಭಕ್ತರ ದಂಡು

ಬಂಟ್ವಾಳ: ನರಹರಿ ಸದಾಶಿವ ದೇವಸ್ಥಾನದಲ್ಲಿ ಆಟಿ ಅಮಾವಾಸ್ಯೆಯ ಪ್ರಯುಕ್ತ ಇಂದು ವಿಶೇಷ ತೀರ್ಥಸ್ನಾನ ನಡೆಯಿತು. ಪವಿತ್ರ ತೀರ್ಥಸ್ನಾನಕ್ಕಾಗಿ ಕರ್ನಾಟಕದ ವಿವಿಧ ಭಾಗಗಳಲ್ಲದೆ ಕೇರಳ ಹಾಗೂ ತಮಿಳುನಾಡಿನಿಂದಲೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದರು.

ನರಹರಿ ಪರ್ವತ ಬಂಡೆ ನಡುವೆ ಶಂಖ, ಗದಾ,ಚಕ್ರ, ಪದ್ಮ, ತೀರ್ಥ ಕುಂಡದಲ್ಲಿ ಭಕ್ತರಿಗೆ ತೀರ್ಥಸ್ನಾನ ಮಾಡಲು ಅವಕಾಶ ಕಲ್ಪಿಸಲಾಗಿತ್ತು.

ಬೆಳಗ್ಗಿನಿಂದಲೇ ದೇವಸ್ಥಾನದಲ್ಲಿ ಭಕ್ತರ ದಂಡು ಕಂಡುಬಂದಿದ್ದು, ಭಕ್ತರು ಪವಿತ್ರ ತೀರ್ಥಸ್ನಾನ ನೆರವೇರಿಸಿ ದೇವಳದಲ್ಲಿ ಮಹಾಗಣಪತಿ ಮತ್ತು ಸದಾಶಿವ ದೇವರಿಗೆ ವಿಶೇಷ ಪೂಜೆ ನಡೆಯಿತು.

ಆಟಿ ಅಮಾವಾಸ್ಯೆಯ ಧಾರ್ಮಿಕ ಮಹತ್ವದ ಹಿನ್ನೆಲೆಯಲ್ಲಿ ದೇವಸ್ಥಾನದ ಸುತ್ತಮುತ್ತ ಭಕ್ತರಿಂದ ಕಿಕ್ಕಿರಿದ ವಾತಾವರಣ ನಿರ್ಮಾಣವಾಗಿತ್ತು.

Related posts

ಆಗಸ್ಟ್ 24ರಿಂದ 28ರವರೆಗೆ ಮಂಗಳೂರಿನ ಶ್ರೀ ಯೋಗೇಶ್ವರ ಕದ್ರಿ ಮಠದಲ್ಲಿ ಶ್ರೀಮದ್ ಲಕ್ಷ್ಮೀ ನಾರಾಯಣ ಮಹಾಯಾಗ

metromed

ನಾಗಬನ ಎಂದರೆ ನಾಗದೇವನಿಗೆ ಮೀಸಲಾದ ಪವಿತ್ರ ಕಾಡು ಅಥವಾ ವೃಕ್ಷಗಳ ತಾಣ ಕೇವಲ ಧಾರ್ಮಿಕ ಆರಾಧನಾ ಸ್ಥಳವಷ್ಟೇ ಅಲ್ಲದೆ, ನೂರಾರು ವಿಧದ ಔಷಧೀಯ ಸಸ್ಯಗಳು ಮತ್ತು ಜೀವವೈವಿಧ್ಯ ರಕ್ಷಿಸುವ ಪ್ರಾಚೀನ ಪರಿಸರ ಸಂರಕ್ಷಣಾ ಕೇಂದ್ರ.

metromed

ಮಂಗಳೂರು ದಸರಾ 2026 : ನವದುರ್ಗೆಯರ ಮೂರ್ತಿಗಳ ರಚನೆಗೆ ಶುಭ ಮುಹೂರ್ತ

metromed

Leave a Comment