36ನೇ ವರ್ಷದ ಸಜೀಪ ಮೊಸರು ಕುಡಿಕೆ ಉತ್ಸವ ನಾಳೆ; ಕೃಷ್ಣ ವೇಷ ಸ್ಪರ್ಧೆ
ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಸಜೀಪನಡು ಗ್ರಾಮದಲ್ಲಿ ವೀರಾಂಜನೇಯ ಯುವಕ ಸಂಘ ಟ್ರಸ್ಟ್ (ರಿ), ಸಜೀಪ ಇವರ ಆಶ್ರಯದಲ್ಲಿ 36ನೇ ವರ್ಷದ ಸಜೀಪ ಮೊಸರು ಕುಡಿಕೆ ಉತ್ಸವವು ಸಂಭ್ರಮದಿಂದ ನಡೆಯಲಿದೆ.
ಉತ್ಸವದ ಅಂಗವಾಗಿ (ಸೆಪ್ಟೆಂಬರ್ 4) ಕೃಷ್ಣ ವೇಷ ಸ್ಪರ್ಧೆ ನಡೆಯಲಿದ್ದು,ಮತ್ತು (ಸೆಪ್ಟೆಂಬರ್ 5) ಅದ್ದೂರಿ ಮೊಸರು ಕುಡಿಕೆ ಉತ್ಸವ ಜರುಗಲಿದೆ.
ಸಜೀಪನಡು ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀಕೃಷ್ಣ ದೇವರ ಪೂಜೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ಬಳಿಕ ವಿವಿಧ ಸಂಘಟನೆಗಳ ಆಕರ್ಷಕ ಟ್ಯಾಬ್ಲೋಗಳು, ಗೊಂಬೆ, ನಾಸಿಕ್ ಬ್ಯಾಂಡ್, ಚಂಡೆ ವಾದನ, ಡಿಜೆ ಹಾಗೂ ಕುಣಿತ ಭಜನೆಗಳೊಂದಿಗೆ ಭವ್ಯ ಮೆರವಣಿಗೆ ಇಡ್ಡಿಪಡ್ಪು, ಮೆಸಲ್ ಪಚ್ಚಿಲ್, ಗೊಳಿಪಡ್ಲು, ಸಜೀಪನಡು, ದೇರಾಜೆ, ಕೊಲ್ಯ ಮತ್ತು ಕೊಳಕೆ ಮಾರ್ಗವಾಗಿ ಸಂಚರಿಸಿ ಮತ್ತೆ ದೇವಸ್ಥಾನಕ್ಕೆ ಆಗಮಿಸಲಿದೆ.

ಮಾರ್ಗದುದ್ದಕ್ಕೂ ವಿವಿಧ ಸಂಘಟನೆಗಳು ತೋರಣಗಳಿಂದ ಅಲಂಕರಿಸಲಾದ ಕುಡಿಕೆಯ ಹಟ್ಟಿಗಳನ್ನು ನಿರ್ಮಿಸಿದ್ದು, ಕುಡಿಕೆಯ ಕಂಬಗಳನ್ನು ಏರಿ ಕುಡಿಕೆ ಒಡೆಯುವ ಸಂಪ್ರದಾಯದ ಮೂಲಕ ಮನರಂಜನೆ ನೀಡಲಿದ್ದಾರೆ. ಅಲ್ಲದೆ, ಭಕ್ತರು ಹಾಗೂ ಸಾರ್ವಜನಿಕರಿಗೆ ತಂಪು ಪಾನೀಯಗಳ ವ್ಯವಸ್ಥೆಯನ್ನೂ ಮಾಡಲಾಗಿದೆ.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನೇತಾಜಿ ಯುವಕ ಸಂಘ (ರಿ)ದೇರಾಜೆ ಇವರ ವತಿಯಿಂದ
ನೇತಾಜಿ ಸಂಘದ ವಠಾರದಲ್ಲಿ ಸೆವೆನ್ ಸ್ಟಾರ್ ಮೆಲೋಡಿಸ್ ಮತ್ತು ಕನ್ನಡ ತುಳು ಚಿತ್ರರಂಗದ ನಟ ನಟಿಯರು ಭಾಗವಹಿಸಲಿದ್ದಾರೆ

ಈ ಉತ್ಸವದಲ್ಲಿ ಸಾವಿರಾರು ಭಕ್ತರು ಹಾಗೂ ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆಯಿದ್ದು, ಆಯೋಜಕರು ಎಲ್ಲರನ್ನು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉತ್ಸವವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದ್ದಾರೆ.
