ನಂಬಿಕೆ ಒರಿಪಾಗ”….ಆಟಿ ತುಳುವರ ಬದುಕಿನ ಜೀವಾಳ: ಆಟಿ ತಿಂಗಳು ಹಿರಿಯರಿಗೆ ಅಗೇಲು ಹಾಕುವುದು.
ಲೇಖನ- ರಾಜೇಶ್ ಭಂಡಾರಿ, ದಡ್ಡಂಗಡಿ
ತುಳುನಾಡಿನ ಸಾಮಾಜಿಕ ವ್ಯವಸ್ಥೆಯಲ್ಲಿ ಭೂತಾರಾಧನೆಗೆ ವಿಶೇಷ ಸ್ಥಾನವಿದೆ. ಪ್ರಾಚೀನ ಕಾಲದಿಂದಲೂ ತುಳುನಾಡಿನ ಭಾಗಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಪ್ರದೇಶಗಳಲ್ಲಿ ಭೂತಾರಾಧನೆ ಜನಜೀವನದೊಂದಿಗೆ ಬೆಸೆದುಕೊಂಡು ಬಂದಿದೆ. ಭೂತಾರಾಧನೆ ಕೇವಲ ಧಾರ್ಮಿಕ ಆಚರಣೆಯಲ್ಲ; ಅದು ಇಲ್ಲಿನ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಜನಪದ ಬದುಕಿನ ಪ್ರಮುಖ ಭಾಗವಾಗಿದೆ.

ತುಳುನಾಡಿನಲ್ಲಿ ಭೂತಗಳನ್ನು ಸೀಮೆಯ ಭೂತ, ಮಾಗಣೆ ಭೂತ, ಗ್ರಾಮದ ಭೂತ ಹಾಗೂ ಕುಟುಂಬದ ಭೂತ ಮುಂತಾದ ವಿವಿಧ ನೆಲೆಗಳಲ್ಲಿ ಆರಾಧಿಸುವ ಪರಂಪರೆ ಇದೆ. ಪ್ರದೇಶ ಮತ್ತು ಸ್ಥಳೀಯ ಇತಿಹಾಸಕ್ಕೆ ಅನುಗುಣವಾಗಿ ಆರಾಧನಾ ವಿಧಾನಗಳಲ್ಲಿಯೂ ವ್ಯತ್ಯಾಸ ಕಂಡುಬರುತ್ತದೆ.
ಬೂತರಾಧನೆ ಜತೆ ಗತಿಸಿದಗುರುಹಿರಿಯರನ್ನು ನೆನಪಿಸುವ ಅವರಿಗೆ ಅಗೇಲು ಹಾಕಿ ಅರಾಧಿಸುವುದು ತುಳುನಾಡಿನ ಒಂದುಕ್ರಮ. ಅದು ಆಟಿತಿಂಗಳಿನಲ್ಲಿ ಎಲ್ಲಾರ ಜಮ್ಮದ(ಜನ್ಮ) ಮನೆಯಲ್ಲಿ ಹಾಕುತ್ತಾರೆ. ಒಂದು ಧರ್ಮದೈವ,ಒಂದು ನಾಗ,ಒಂದು ಮುಡಿಪು ಒಂದು ಹಿರಿಯರಿಗೆ ಬಡಿಸುವುದು ಇದು ತುಳುವರಾದ ದ್ರಾವಿಡ ಪರಂಪರೆಯಾಗಿದೆ. ತುಳುನಾಡಿನಲ್ಲಿ ಮೂಲ ದ್ರಾವಿಡ ಪರಂಪರೆಯಲ್ಲಿ ಮಾತೃಮೂಲ ಪದ್ದತಿಯನ್ನು ಹೊಂದಿ ವಂಶವೃಕ್ಷದ ಹಿರಿಯರು ನಂಬಿದ ದೈವವೇ ನಮ್ಮ ಧರ್ಮದೈವ ಅಗಿದೆ. ಅದು ಅಯಾಯ ಸಮುದಾಯಕ್ಕೊಂದು ಬೇರೆ ಬೇರೆ ಶಕ್ತಿಗಳಾಗಿ ಇರುತ್ತದೆ.ಪ್ರಕೃತಿ ಅರಾಧನೆಯಲ್ಲಿ ಶಕ್ತಿಪೂಜೆ ಹಿರಿಯರು ನಡೆಸಿದ ಕ್ರಮ. ಪಂಜಿ ಬೂತ, ಪಿಲಿಬೂತ ಅರಾಧನೆಯನ್ನು ತಮ್ಮ ಬೇಸಾಯ ಕೃಷಿಭೂಮಿಸಂರಕ್ಷಣೆಗಾಗಿ ದೈವವನ್ನು ಪ್ರಕಟಿಸಿ ಮಣೆಮಂಚದಲ್ಲಿ ಮೊಗ , ಕಡ್ತಲೆಯನ್ನಿಟ್ಟು ಅರಾಧಿಸಿದರು ಪಂಜುರ್ಲಿದೈವ ತುಳುವರ ಮೂಲದೈವವಾಗಿದ್ದರೂ, ಜೂಮಾದಿ,ಮಲರಾಯಿ,ತೊಂಡಾಚ್ಚನ್ ಸೇರಿದಂತೆ ಹಲವಾರು ಧರ್ಮದೈವಗಳನ್ನು ಅವರವರ ತರವಾಡು/ಮೂಲಜಮ್ಮದಲ್ಲಿದೆ. ಒಬ್ಬ ಕುಟುಂಬದ ಸದಸ್ಯ ತನ್ನ ಮರಣ ಪಡೆದಾಗ ಅತ ಪ್ರೇತ (ಕುಲೆ) ಅಗಿ

ಲೌಕಿಕಬದುಕಿನಿಂದ ಹೊರಟು ಕಾಲೆಯಾಗಿ ಸುತ್ತುತ್ತಾ ಇರುತ್ತಾನೆ. ಹದಿಮೂರು,ಹದಿನಾರು ದಿನದಲ್ಲಿ ತನ್ನ ಸ್ವತ ಮನೆಯಲ್ಲಿ ಉತ್ತರಕ್ರಿಯೆ ಮಾಡಿಸಿ ಸುದ್ದವಾಗಿ, ರಾತ್ರಿ ಒಂದು ಎಲೆ ಹಾಕಿ ಬಡಿಸಿ ಅತನಿಗೆ ಮಾಂಸಾದಿ ಅನ್ನಮಾಡಿ ಕ್ರಿಯೆಗಳನ್ನು ಮಾಡಿಸುತ್ತಾರೆ.ಒಂದು ವಿಷುವಿನಿಂದ ಇನ್ನೊಂದು ವಿಷುವಿಗೆ ಅತ ಮೋಕ್ಷ ಪಡೆಯದೆ ಕುಲೆಯಾಗಿ ಇರುತ್ತಾನೆ.ಒಂದು ವರುಷದ ನಂತರ ಅತನಿಗೆ ಅತನ ಕುಟುಂಬದವರು/ಸಂಸಾರದವರು ಸೇರಿ ವಂಶವೃಕ್ಷ ದ ಜಮ್ಮದ ಮನೆಯಲ್ಲಿ ಹದಿನಾರಕ್ಕೆ ಸೇರಿಸುವ ಕ್ರಮ ಮಾಡುತ್ತಾರೆ.ಈ ಹೊತ್ತಿನಲ್ಲಿ ಡ್ರಾವಿಡ ಸಂಪ್ರದಾಯದಂತೆ ಹದಿನಾರನೇ ಎಲೆಹಾಕಿ ಒಂದು ಎಲೆ ಹೊಸದಾಗಿ ಸೇರಿಸಿ ಅತನನ್ನು ಮೂಲಕ್ಕೆ ಧರ್ಮದೈವದ ಮೂಲಕ ಪ್ರಾರ್ಥಿಸಿ, ಅಗೇಲು ಬಳಸುವುವ ಹೊತ್ತಿನಲ್ಲಿ ಧರ್ಮದೈವದ ಸಾನಿಧ್ಯದಲ್ಲೇ ಮೂಲ ವಂಶಕ್ಕೆ ಸೇರಿಸುವುದು. ಅತ ನಂತರ ದೈವಗಳ ನೆಲೆಯಲ್ಲಿ ಶಕ್ತಿಯಾಗಿ ತನ್ನ ಕುಟುಂಬದವರನ್ನ ಸಲಹುತ್ತಾನೆ.ತುಳುನಾಡಿನಲ್ಲಿ ಸತ್ತವರು ಪುನರ್‌ಜನ್ಮ ವಿಲ್ಲ, ಅವರು ಜಮ್ಮದಲ್ಲಿ ದೈವಿಕ ಶಕ್ತಿಯಾಗಿ ಪರಿವರ್ತಿಸುತ್ತಾರೆ. ನಂತರ ಪ್ರೇತಕ್ಕೆ /ಕುಲೆಗೆ ಬಳಸುವುದು ಅಗಿರುವುದಿಲ್ಲ ಬದಲಾಗಿ ಹಿರಿಯರಿಗೆ ಬಳಸುವುದು ಅಗೇಲು ಹಾಕುವುದು ಅಂತಾರೆ. ಪ್ರೇತಕ್ಕೆ/ಸೈತಿನುಕುಲೆಗ್ ಬಳಸುವುದು ಅಂತ ಕರೆಯುವುದು ಸರಿಯಲ್ಲ. ಗುರುಹಿರಿಯರಿಗೆ ಬಡಿಸುವುದು ಸರಿಯಾದ ಪದ. ತುಳುನಾಡಿನ ಹಿಂದೆ ಹಳೆಮನೆಯಲ್ಲಿ ಅಡಿಗೆ ಮನೆಯಲ್ಲಿ ಮಿತ್ತಡ್ಯಾ ಅಂತ ಇದೆ . ಅಲ್ಲಿ ಮನೆಯಲ್ಲಿ ಯಾವುದೇ ಮಾಂಸಾಹಾರಿ ಪದಾರ್ಥ ಜತೆ ಆನ್ನ ಇಡುವ ಕ್ರಮ ಇದೆ .ಅದು ಕೆಲ ಹೊತ್ತಿನಲ್ಲೇ ಸಪ್ಪೆಯಾಗಿರುತ್ತದೆ. ಹಿರಿಯರು ಅಗೋಚರ ಶಕ್ತಿಯಾಗಿ ಸ್ವೀಕರಿಸಿದ್ದಾರೆ ಸದಾ ಮನೆಯಲ್ಲಿ ಇರುತ್ತಾರೆ ಅನ್ನುವ ಮಾತು ಕಂಡುಬರುತ್ತಿತ್ತು. ದೈವಗಳಿಗೆ ಪರ್ವ ವರುಷವಾದಿ ಅದರೆ, ಗತಿಸಿದ ಹಿರಿಯರಿಗೆ ಅಗೇಲು ಹಾಕುವುದು ಒಂದು ಆಟಿಯಲ್ಲಿ ಮತ್ತು ದೈವದ ಪರ್ವ ದಂದು ಎಲ್ಲಾರೂ ಕೋಳಿ ,ಸೇಂದಿ ತಂದು ಕುಟುಂಬಿಕರು ಸೇರಿ ಮಾತೃ ಕುಟುಂಬದಜಮ್ಮದ/ತರವಾಡ್ ಮನೆಯಲ್ಲಿ ಬಡಿಸುತ್ತಾರೆ. ಈ ಕಾರ್ಯಕ್ರಮ ಕ್ಕೆ ಎಷ್ಟೇ ದೂರ ಇದ್ದರೂ ಅಟಿ ಬಳಸುವ ಕಾರ್ಯಕ್ರಮದಲ್ಲಿ ಎಲ್ಲಾರೂ ಜತೆಯಾಗಿಸೇರಿಕೊಂಡು ಭೋಜನ ಮಾಡುತ್ತಾರೆ.

ಅಗೆಲು ಬಲಸುನಿ ಇದು ಆಟಿ ತಿಂಗಳಲ್ಲಿ ಸತ್ತವರಿಗೆ ಬಡಿಸುವ ಪೂಜೆ. “ಅಗೆಲು” ಅಂದ್ರೆ “ಬಡಿಸುವುದು” ಶುದ್ದಾಚಾರದಲ್ಲಿಅಡುಗೆ ಮಾಡಬೇಕು.ಮೊದಲು ಕೋಳಿ ಪದಾರ್ಥ, ಅಕ್ಕಿಯ ಅನ್ನ ಮಾಡಬೇಕು. ಒಂದು ಮೀನಿನ ಗಸಿ ಮಾಡಬೇಕು. ಹದಿನಾಲ್ಕು ಬಾಳೆ ಎಲೆ ಹಾಕಬೇಕು. ನಡುವೆ ಒಂದು ಮಣ್ಣಿನ ಚೊಂಬು ನೀರು ಇಡ್ತಾರೆ. ಮೊದಲು ಮೀನಿನ ಗಸಿಯನ್ನು ಎಲೆಯ ತುದಿಯಲ್ಲಿ ಬಡಿಸುತ್ತಾರೆ. ಆಮೇಲೆ ಕೋಳಿ ಪದಾರ್ಥ ಬಡಿಸುತ್ತಾರೆ.
ಕುಟುಂಬದ ಹಿರಿಯ ವ್ಯಕ್ತಿ ಪ್ರಾರ್ಥನೆಮಾಡಬೇಕು. ಬಾಗಿಲು ಎಳೆದು ಸ್ವಲ್ಪ ಹೊತ್ತು ಹೊರಗೆ ಹೋಗಬೇಕು. ಆಮೇಲೆ ಒಳಗೆ ಹೋಗಿ ಮಣೆಯಲ್ಲಿ ಇಟ್ಟ ನೀರನ್ನು ಹೊರಗೆ ಚೆಲ್ಲಬೇಕು.
ಕುಟುಂಬದ ಹಿರಿಯರು ಪ್ರಾರ್ಥನೆ ಮಾಡಿ “ಆಟಿಯ ಪರ್ವ” ಹಾಗಾಗಿ ಈ ಸಮಯದಲ್ಲಿ ನಿಮಗೆ ನಾವು ಬಡಿಸಿದ ಅಗೆಲು, ಇದನ್ನು ಸಂತೋಷದಿಂದ ಸ್ವೀಕರಿಸಿ ಬೇರೆ ಎಲ್ಲಿಗೂ ಹೋಗದೆ ಇಲ್ಲೇ ಇದ್ದು ನಮ್ಮ ಕುಟುಂಬವನ್ನು ಸಲಹುಬೇಕು” ಅಂತ ಪ್ರಾರ್ಥಿಸುತ್ತಾರೆ.
ಆಟಿ ತಿಂಗಳಲ್ಲಿ ಪ್ರೇತ, ಪಿಶಾಚಿಗಳು ಓಡಾಡುತ್ತವೆ ಅನ್ನೋ ನಂಬಿಕೆ ತುಳುವರದ್ದು.
ಪಿತೃಗಳ ನೆನಪು: ತುಳುನಾಡಿನ ಸಂಸ್ಕೃತಿಯಲ್ಲಿ ಮೃತರಾದ ಹಿರಿಯರ ಆತ್ಮಗಳು ಪ್ರೇತ ಅಥವಾ ಕುಲೆಗಳಾಗಿ ಕುಟುಂಬದೊಂದಿಗೆ ಇರುತ್ತವೆ ಎಂಬ ನಂಬಿಕೆಯಿದೆ.ಅದರೆ ಅವರು ಹಿರಿಯರು ಅನ್ನುವಂತಾಗಿರುತ್ತಾರೆ.
ಆಟಿ ಅಮಾವಾಸ್ಯೆಯಂದು ಸಾಮಾನ್ಯವಾಗಿ ಆಟಿ ತಿಂಗಳಲ್ಲಿ, ವಿಶೇಷವಾಗಿ ಕೆಲವರು ಮನೆಯಲ್ಲಿ ಗತಿಸಿದ ಹಿರಿಯರ ನೆನಪಿಗೆ ಆಟಿ ಅಮಾವಾಸ್ಯೆಯ ದಿನದಂದು ಅಥವಾ ಆ ತಿಂಗಳ ನಿರ್ದಿಷ್ಟ ದಿನದಂದು ಈ ಅಗೇಲು ಕೊಡುವ ಕ್ರಮವನ್ನು ಮಾಡಲಾಗುತ್ತದೆ.
ಅಗೇಲಿನಲ್ಲಿ ಏನೇನು ಇರುತ್ತದೆ? ಹಿರಿಯರಿಗೆ ಇಷ್ಟವಾದ ಅಕ್ಕಿ ಗಂಜಿ, ಅಡುಗೆ ಪದಾರ್ಥಗಳು, ಉಪ್ಪು, ಹುಳಿ, ಮೆಣಸು ಹಾಗೂ ಸಾಂಪ್ರದಾಯಿಕ ಖಾದ್ಯಗಳನ್ನು ಸಿದ್ಧಪಡಿಸಲಾಗುತ್ತದೆ.
ಮಾಂಸಾಹಾರಿ ಪದ್ಧತಿಯಿರುವ ಕುಟುಂಬಗಳಲ್ಲಿ ಕೋಳಿ ಅಥವಾ ಮೀನಿನ ಪದಾರ್ಥಗಳನ್ನು ಮಾಡಿ ಅಗೇಲಿಗೆ ಇಡಲಾಗುತ್ತದೆ.
ಈ ಆಚರಣೆಯು ನಮ್ಮನ್ನು ಅಗಲಿದ ಹಿರಿಯರನ್ನು ಸ್ಮರಿಸಲು, ಅವರ ಬಗ್ಗೆ ಗೌರವ ತೋರಲು ಮತ್ತು ತರವಾಡು ಮನೆಯ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲು ಇರುವ ಸಾಂಪ್ರದಾಯಿಕ ಮಾರ್ಗವಾಗಿದೆ.
