32.5 C
ಮಂಗಳೂರು
September 18, 2026
Breaking News

36ನೇ ವರ್ಷದ ಸಜೀಪ ಮೊಸರು ಕುಡಿಕೆ ಉತ್ಸವ: ನಾಳೆ ನೇತಾಜಿ ಯುವಕ ಸಂಘದ ವಠಾರದಲ್ಲಿ 7 ಸ್ಟಾರ್ “ಮೆಲೋಡಿಯಾಸ್” ಕಾರ್ಯಕ್ರಮ

36ನೇ ವರ್ಷದ ಸಜೀಪ ಮೊಸರು ಕುಡಿಕೆ ಉತ್ಸವ: ನಾಳೆ ನೇತಾಜಿ ಯುವಕ ಸಂಘದ ವಠಾರದಲ್ಲಿ 7 ಸ್ಟಾರ್ “ಮೆಲೋಡಿಯಾಸ್” ಕಾರ್ಯಕ್ರಮ

ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಸಜೀಪನಡು ಗ್ರಾಮದಲ್ಲಿ ಇರುವ ಸಮಾಜಸೇವೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ನೇತಾಜಿ ಯುವಕ ಸಂಘಕ್ಕೆ ಅದರ ಅತ್ಯುತ್ತಮ ಸೇವಾ ಕಾರ್ಯಗಳನ್ನು ಗುರುತಿಸಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಸಂಘವು ಹಲವು ವರ್ಷಗಳಿಂದ ಸಮಾಜದ ಅಸಹಾಯಕರು, ಬಡವರು ಹಾಗೂ ಅಗತ್ಯವಿರುವ ಕುಟುಂಬಗಳ ನೆರವಿಗೆ ಧಾವಿಸುತ್ತಿದ್ದು, ಅಕ್ಕಿ ಸೇರಿದಂತೆ ದಿನನಿತ್ಯದ ಆಹಾರ ಸಾಮಗ್ರಿಗಳ ವಿತರಣೆ, ಸಮಾಜಮುಖಿ ಕಾರ್ಯಕ್ರಮಗಳ ಆಯೋಜನೆ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ವಿವಿಧ ಸೇವಾ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ.

ಈ ಸಮಾಜಸೇವೆಯ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಯಲ್ಲಿಯೂ ಸಂಘ ಮುಂಚೂಣಿಯಲ್ಲಿದೆ.

ಶ್ರೀ ವೀರಾಂಜನೇಯ ಯುವಕ ಸಂಘ ಟ್ರಸ್ಟ್ (ರಿ.), ಸಜೀಪ ಆಯೋಜಿಸಿರುವ 36ನೇ ವರ್ಷದ ಸಜೀಪ ಮೊಸರು ಕುಡಿಕೆ ಉತ್ಸವದ ಅಂಗವಾಗಿ, ನೇತಾಜಿ ಯುವಕ ಸಂಘದ ಆವರಣದಲ್ಲಿ ಅದ್ದೂರಿ 7 ಸ್ಟಾರ್ “ಮೆಲೋಡಿಯಾಸ್” ಮನರಂಜನಾ ಕಾರ್ಯಕ್ರಮ ದಿನಾಂಕ ಸೆಪ್ಟೆಂಬರ್ 5 – 2026ರಂದು ಶನಿವಾರ ಸಂಜೆ 3.30ಕ್ಕೆ ಸ್ಥಳ: ನೇತಾಜಿ ಯುವಕ ಸಂಘದ ಆವರಣದಲ್ಲಿ ನಡೆಯಲಿದೆ

ಈ ವಿಶೇಷ ಕಾರ್ಯಕ್ರಮದಲ್ಲಿ ಕನ್ನಡ ಹಾಗೂ ತುಳು ಚಲನಚಿತ್ರರಂಗದ ಹೆಸರಾಂತ ನಟ–ನಟಿಯರು ಭಾಗವಹಿಸಿ, ತಮ್ಮ ಮನರಂಜನಾ ಪ್ರದರ್ಶನಗಳ ಮೂಲಕ ಉತ್ಸವದ ಮೆರುಗನ್ನು ಇನ್ನಷ್ಟು ಹೆಚ್ಚಿಸಲಿದ್ದಾರೆ.

ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸಂಘದ ಪದಾಧಿಕಾರಿಗಳು ವಿನಂತಿಸಿದ್ದರೆ

Related posts

ನಾಲ್ಕನೇ ವರ್ಷದ ‘ಅಮ್ಮೆಂಬಳ ಮಾಗಣೆದ ಕೆಸರ್ ದ ಕಂಡದ ಗೌಜಿ ಗಮ್ಮತ್ತ್ ದ ಲೇಸ್’ ಕೆಸರು ಗದ್ದೆ ಕ್ರೀಡಾಕೂಟ

metromed

ಆಟಿ ಅಮಾವಾಸ್ಯೆ: ನರಹರಿ ದೇವಸ್ಥಾನಕ್ಕೆ ಮಾಜಿ ಸಚಿವರಾದ ರಮನಾಥ ರೈ ಭೇಟಿ

metromed

ಬಂಟ್ವಾಳದಲ್ಲಿ ಮೆಟ್ರೋ ಮಾದರಿಯ ರೈಲು ನಿಲ್ದಾಣ ; ಪ್ರಧಾನಿ ಮೋದಿಯಿಂದ ಚಾಲನೆ!

metromed

Leave a Comment