November 15, 2026
Bhakthi News

ಮಂಗಳೂರು ಕೊಂಚಾಡಿ ಮಂದಾರಬೈಲು ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಪೂರ್ವಭಾವಿ | ವಿವಿಧ ಹೋಮ-ಹವನ, ಮುಷ್ಟಿ ಕಾಣಿಕೆ ಸೇವೆ; ಗಣ್ಯರಿಂದ ಬ್ರಹ್ಮಕಲಶೋತ್ಸವದ ವಿಜ್ಞಾಪನಾ ಪತ್ರ ಬಿಡುಗಡೆ

ಮಂಗಳೂರು : ಕೊಂಚಾಡಿಮಂದಾರಬೈಲ್ ಶ್ರೀ ದುರ್ಗಾಪರಮೇಶ್ವರಿ ವೆಂಕಟರಮಣ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಧಾರ್ಮಿಕ ಕಾರ್ಯಕ್ರಮ

ವಿವಿಧ ಹೋಮ-ಹವನ, ಮುಷ್ಟಿ ಕಾಣಿಕೆ ಸೇವೆ; ಗಣ್ಯರಿಂದ ಬ್ರಹ್ಮಕಲಶೋತ್ಸವದ ವಿಜ್ಞಾಪನಾ ಪತ್ರ ಬಿಡುಗಡೆ

ಮಂದಾರಬೈಲ್ ಶ್ರೀ ದುರ್ಗಾಪರಮೇಶ್ವರಿ ವೆಂಕಟರಮಣ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಧಾರ್ಮಿಕ ಕಾರ್ಯಕ್ರಮ

ವಿವಿಧ ಹೋಮ-ಹವನ, ಮುಷ್ಟಿ ಕಾಣಿಕೆ ಸೇವೆ; ಗಣ್ಯರಿಂದ ಬ್ರಹ್ಮಕಲಶೋತ್ಸವದ ವಿಜ್ಞಾಪನಾ ಪತ್ರ ಬಿಡುಗಡೆ

ಮಂದಾರಬೈಲ್ ಶ್ರೀ ದುರ್ಗಾಪರಮೇಶ್ವರಿ ವೆಂಕಟರಮಣ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಧಾರ್ಮಿಕ ಕಾರ್ಯಕ್ರಮ

ವಿವಿಧ ಹೋಮ-ಹವನ, ಮುಷ್ಟಿ ಕಾಣಿಕೆ ಸೇವೆ; ಗಣ್ಯರಿಂದ ಬ್ರಹ್ಮಕಲಶೋತ್ಸವದ ವಿಜ್ಞಾಪನಾ ಪತ್ರ ಬಿಡುಗಡೆ

ಮಂದಾರಬೈಲ್: ಮಂದಾರಬೈಲು ಶ್ರೀ ದುರ್ಗಾಪರಮೇಶ್ವರಿ ವೆಂಕಟರಮಣ ದೇವಸ್ಥಾನದಲ್ಲಿ ಜರುಗಲಿರುವ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನೆರವೇರಿದವು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದಲ್ಲಿ ಗಣಹೋಮ, ಮೃತ್ಯುಂಜಯ ಹೋಮ ಸೇರಿದಂತೆ ವಿವಿಧ ಹೋಮ-ಹವನಗಳು ಹಾಗೂ ಮುಷ್ಟಿ ಕಾಣಿಕೆ ಸೇವೆ ನಡೆಯಿತು. ಧಾರ್ಮಿಕ ವಿಧಿವಿಧಾನಗಳ ಅಂಗವಾಗಿ ಸಾಮೂಹಿಕ ಪ್ರಾರ್ಥನೆಯೂ ನೆರವೇರಿತು. ಭಕ್ತರು ಭಕ್ತಿಪೂರ್ವಕವಾಗಿ ಧಾರ್ಮಿಕ ಸೇವೆಗಳಲ್ಲಿ ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾದರು.

ಇದೇ ಸಂದರ್ಭದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಬ್ರಹ್ಮಕಲಶೋತ್ಸವದ ವಿಜ್ಞಾಪನಾ ಪತ್ರ ಬಿಡುಗಡೆ ಸಮಾರಂಭ ನಡೆಯಿತು. ಗಣ್ಯರು ವಿಜ್ಞಾಪನಾ ಪತ್ರವನ್ನು ಬಿಡುಗಡೆಗೊಳಿಸಿ ಬ್ರಹ್ಮಕಲಶೋತ್ಸವದ ಧಾರ್ಮಿಕ ಮಹತ್ವ ಹಾಗೂ ಕಾರ್ಯಕ್ರಮದ ಯಶಸ್ಸಿಗೆ ಎಲ್ಲರೂ ಕೈಜೋಡಿಸುವಂತೆ ಶುಭ ಹಾರೈಸಿದರು.

ವಿಜ್ಞಾಪನಾ ಪತ್ರ ಬಿಡುಗಡೆ ಸಮಾರಂಭದಲ್ಲಿ ರವೀಂದ್ರ ಶೇಟ್, ದೇರಬೈಲ್ ವಿಠ್ಠಲದಾಸ್ ತಂತ್ರಿ, ಕ್ಷೇತ್ರದ ಅಧ್ಯಕ್ಷ ಲಕ್ಷಣ ದೇವಾಡಿಗ, ಬ್ರಹ್ಮಕಲಶ ಸಮಿತಿ ಅಧ್ಯಕ್ಷ ದುರ್ಗಾದಾಸ್ ಭಟ್, ಮಂಗಳೂರು ವಿಪ್ರ ಸಮಾಗಮ ವೇದಿಕೆಯ ರಾಮಕೃಷ್ಣ ರಾವ್ ಪೆರಾರ, ಮಂಗಳೂರಿನ ಕಲ್ಕೂರು ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರು, ಮಂದಾರಬೈಲ್ ಮಹಿಳಾ ವೇದಿಕೆ ಅಧ್ಯಕ್ಷೆ ಜ್ಯೋತಿ ಪ್ರಮೀಣ್ ಕುಮಾರ್, ಬ್ರಹ್ಮಕಲಶ ಸಮಿತಿ ಕಾರ್ಯದರ್ಶಿ ಗುರುಪ್ರಸಾದ್ ಕಡಂಬಾರ್ ಹಾಗೂ ಮಧುಸೂದನ್ ಅಳುರಾಯ ಉಪಸ್ಥಿತರಿದ್ದರು.

ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಧಾರ್ಮಿಕ ಹಾಗೂ ಸಂಘಟನಾತ್ಮಕ ಸಿದ್ಧತೆಗಳು ಮುಂದುವರಿದಿದ್ದು, ಭಕ್ತಾದಿಗಳಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ.

Related posts

36ನೇ ವರ್ಷದ ಸಜೀಪ ಮೊಸರು ಕುಡಿಕೆ ಉತ್ಸವ ನಾಳೆ; ಕೃಷ್ಣ ವೇಷ ಸ್ಪರ್ಧೆ

metromedia

ಆಟಿ ಅಮಾವಾಸ್ಯೆ: ನರಹರಿ ದೇವಸ್ಥಾನಕ್ಕೆ ಮಾಜಿ ಸಚಿವರಾದ ರಮನಾಥ ರೈ ಭೇಟಿ

metromedia

ನಂಬಿಕೆ ಒರಿಪಾಗ”….ಆಟಿ ತುಳುವರ ಬದುಕಿನ ಜೀವಾಳ: ಆಟಿ ತಿಂಗಳು ಹಿರಿಯರಿಗೆ ಅಗೇಲು ಹಾಕುವುದು.

metromedia

Leave a Comment