32.5 C
ಮಂಗಳೂರು
September 18, 2026
Bhakthi News

ಮಂಗಳೂರು ದಸರಾ 2026 : ನವದುರ್ಗೆಯರ ಮೂರ್ತಿಗಳ ರಚನೆಗೆ ಶುಭ ಮುಹೂರ್ತ

ಮಂಗಳೂರು ದಸರಾ 2026 : ನವದುರ್ಗೆಯರ ಮೂರ್ತಿಗಳ ರಚನೆಗೆ ಶುಭ ಮುಹೂರ್ತ


ಮಂಗಳೂರು : ಮಂಗಳೂರು ದಸರಾದ ಹಿನ್ನಲೆಯಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ದರ್ಬಾರ್ ಮಂಟಪದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ನವದುರ್ಗೆಯರ ಮೂರ್ತಿಗಳ ರಚನೆಗೆ ಶುಭ ಮುಹೂರ್ತ ನೆರವೇರಿತು.

ಅಕ್ಟೋಬರ್ 11ರಿಂದ 21ರವರೆಗೆ ಜರುಗುವ ಮಂಗಳೂರು ದಸರಾದ ಹಿನ್ನೆಲೆಯಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ದರ್ಬಾರ್ ಮಂಟಪದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ನವದುರ್ಗೆಯರ ಮೂರ್ತಿಗಳ ರಚನೆಗೆ ಅಧಿಕೃತ ಚಾಲನೆ ಸಿಕ್ಕಿದೆ. ಈ ಸಂದರ್ಭದಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷರು ಜಯರಾಜ್ ಎಚ್. ಸೋಮಸುಂದರಂ ಉಪಸ್ಥಿತರಿದ್ದರು.

ಇನ್ನು ಶ್ರೀ ಗೋಕರ್ಣನಾಥ ಕ್ಷೇತ್ರದ ನವೀಕರಣದ ರೂವಾರಿ ಕೇಂದ್ರದ ಮಾಜಿ ವಿತ್ತ ಸಚಿವ ಬಿ. ಜನಾರ್ದನ ಪೂಜಾರಿಯವರ ನೇತೃತ್ವದಲ್ಲಿ ಮಂಗಳೂರು ದಸರಾವು ಅಕ್ಟೋಬರ್ 11 ರಿಂದ ಅಕ್ಟೋಬರ್ 21 ರವರೆಗೆ ಅತ್ಯಂತ ವೈಭವದಿಂದ ಜರುಗಲಿದೆ.

Related posts

ಆಗಸ್ಟ್ 24ರಿಂದ 28ರವರೆಗೆ ಮಂಗಳೂರಿನ ಶ್ರೀ ಯೋಗೇಶ್ವರ ಕದ್ರಿ ಮಠದಲ್ಲಿ ಶ್ರೀಮದ್ ಲಕ್ಷ್ಮೀ ನಾರಾಯಣ ಮಹಾಯಾಗ

metromed

ನಂಬಿಕೆ ಒರಿಪಾಗ”….ಆಟಿ ತುಳುವರ ಬದುಕಿನ ಜೀವಾಳ: ಆಟಿ ತಿಂಗಳು ಹಿರಿಯರಿಗೆ ಅಗೇಲು ಹಾಕುವುದು.

metromed

ಆಟಿ ಅಮಾವಾಸ್ಯೆ: ನರಹರಿ ದೇವಸ್ಥಾನಕ್ಕೆ ಮಾಜಿ ಸಚಿವರಾದ ರಮನಾಥ ರೈ ಭೇಟಿ

metromed

Leave a Comment