32.5 C
ಮಂಗಳೂರು
September 18, 2026
Breaking News

ನಾಲ್ಕನೇ ವರ್ಷದ ‘ಅಮ್ಮೆಂಬಳ ಮಾಗಣೆದ ಕೆಸರ್ ದ ಕಂಡದ ಗೌಜಿ ಗಮ್ಮತ್ತ್ ದ ಲೇಸ್’ ಕೆಸರು ಗದ್ದೆ ಕ್ರೀಡಾಕೂಟ






ಬೋಳಿಯಾರುನಲ್ಲಿ ನಾಲ್ಕನೇ ವರ್ಷದ ‘ಅಮ್ಮೆಂಬಳ ಮಾಗಣೆದ ಕೆಸರ್ ದ ಕಂಡದ ಗೌಜಿ ಗಮ್ಮತ್ತ್ ದ ಲೇಸ್’ ಕೆಸರು ಗದ್ದೆ ಕ್ರೀಡಾಕೂಟ

ಬೋಳಿಯರ್, ಉಳ್ಳಾಲ : ಸಾಮಾಜಿಕ ಹಾಗೂ ಸಮಾಜಸೇವಾ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ವೀರ ಕೇಸರಿ ಫ್ರೆಂಡ್ಸ್, ಮಾಜಿ ಬೊಳಿಯರು ಸಂಘಟನೆ (ಬೊಳ್ಯಾರು) ತನ್ನ ಸೇವಾ ಚಟುವಟಿಕೆಗಳ ಮೂಲಕ ಬೊಳ್ಯಾರು ಪರಿಸರದಲ್ಲಿ ವಿಶೇಷ ಹೆಸರನ್ನು ಗಳಿಸಿದೆ.

ಜಾತಿ-ಮತ ಭೇದವಿಲ್ಲದೆ ಸಂಘದ ಎಲ್ಲಾ ಸದಸ್ಯರು ಒಗ್ಗಟ್ಟಿನಿಂದ ಸಮಾಜಮುಖಿ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಆರೋಗ್ಯ ಸೇವೆಯ ಮಹತ್ವವನ್ನು ಅರಿತು ಸಮಾಜಕ್ಕೆ ಆಂಬುಲೆನ್ಸ್ ಸೇವೆಯನ್ನು ನೀಡಿರುವ ಈ ಸಂಘಟನೆ, ಗ್ರಾಮದಲ್ಲಿರುವ ಗೋಶಾಲೆಗೆ ಪ್ರತಿವರ್ಷ ಗೋಮೇವು ಒದಗಿಸುವ ಕಾರ್ಯವನ್ನೂ ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಇದರ ಜೊತೆಗೆ ವಿವಿಧ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸೇವಾ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜನಮನ ಗೆದ್ದಿದೆ.

ಆಧುನಿಕ ಯುಗದಲ್ಲಿ ಮರೆಯಾಗುತ್ತಿರುವ *ಕೃಷಿ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ, ಗ್ರಾಮೀಣ ಸೊಗಡನ್ನು ಜನರಿಗೆ ಪರಿಚಯಿಸುವ ನಿಟ್ಟಿನಲ್ಲಿ ಪ್ರತಿವರ್ಷ ಮಳೆಗಾಲದ ಮನೋರಂಜನಾ ಕಾರ್ಯಕ್ರಮವಾಗಿ *ನಾಲ್ಕನೇ ವರ್ಷದ “ಅಮ್ಮೆಂಬಳ ಮಾಗಣೆದ ಕೆಸರ್ ದ ಕಂಡದ ಗೌಜಿ ಗಮ್ಮತ್ತ್ ದ ಲೇಸ್” ಕೆಸರು ಗದ್ದೆ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮದ ವಿವರ:

  • ದಿನಾಂಕ: 16-08-2026 (ಭಾನುವಾರ)
  • ಸ್ಥಳ: ಅಮ್ಮೆಂಬಳ ಮಾಜಿ ಶ್ರೀ ಮಹಮ್ಮಾಯಿ ದೇವಸ್ಥಾನದ ಬಳಿಯ ಗದ್ದೆ

ಈ ವಿಶಿಷ್ಟ ಕಾರ್ಯಕ್ರಮದ ನೇರಪ್ರಸಾರ ಭ್ರಾಮರಿ ಭಕ್ತಿ ಟಿವಿಯಲ್ಲಿ ನಡೆಯಲಿದೆ.

ಊರ ಹಾಗೂ ಪರಊರಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಈ ಕೃಷಿ ಸಂಸ್ಕೃತಿ ಮತ್ತು ಗ್ರಾಮೀಣ ಕ್ರೀಡಾಕೂಟವನ್ನು ಯಶಸ್ವಿಗೊಳಿಸಬೇಕಾಗಿ ವೀರ ಕೇಸರಿ ಫ್ರೆಂಡ್ಸ್, ಮಾಜಿ ಬೊಳಿಯರು ಸಂಘಟನೆ ವಿನಂತಿಸಿದೆ.

Related posts

ಸಜೀಪ : ಮಾದಕ ವಸ್ತುಗಳ ಸೇವನೆ ಕಂಡುಬಂದರೆ ಪೊಲೀಸರಿಗೆ ಮಾಹಿತಿ ನೀಡಿ: ಮಂಜುನಾಥ ಟಿ

metromed

ಆಟಿ ಅಮಾವಾಸ್ಯೆ: ನರಹರಿ ದೇವಸ್ಥಾನಕ್ಕೆ ಮಾಜಿ ಸಚಿವರಾದ ರಮನಾಥ ರೈ ಭೇಟಿ

metromed

36ನೇ ವರ್ಷದ ಸಜೀಪ ಮೊಸರು ಕುಡಿಕೆ ಉತ್ಸವ: ನಾಳೆ ನೇತಾಜಿ ಯುವಕ ಸಂಘದ ವಠಾರದಲ್ಲಿ 7 ಸ್ಟಾರ್ “ಮೆಲೋಡಿಯಾಸ್” ಕಾರ್ಯಕ್ರಮ

metromed

Leave a Comment