November 5, 2026
Uncategorized

ಮಂಗಳೂರು : ಪಿಲಿನಲಿಕೆ (ಹುಲಿ ವೇಷ ಕುಣಿತ) ಸ್ಪರ್ಧೆಯ 11ನೇ ಆವೃತ್ತಿಯು 2026ರ ಅಕ್ಟೋಬರ್ 20ರಂದು ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯಲಿದೆ.

ಪಿಲಿ ನಲಿಕೆ ಸೀಸನ್ 11 , ಅಕ್ಟೋಬರ್ 20 ರಂದು ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಅದ್ಧೂರಿಯಾಗಿ ನಡೆಯಲಿರುವ ಹುಲಿವೇಷ ಕುಣಿತ ಗಣ್ಯ ಅತಿಥಿಗಳು ಭಾಗಿ

ಮಂಗಳೂರು : ಪಿಲಿನಲಿಕೆ (ಹುಲಿ ವೇಷ ಕುಣಿತ) ಸ್ಪರ್ಧೆಯ 11ನೇ ಆವೃತ್ತಿಯು 2026ರ ಅಕ್ಟೋಬರ್ 20ರಂದು ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯಲಿದೆ.

ಪಿಲಿ ನಲಿಕೆ ಸೀಸನ್–11ಕ್ಕೆ ಗಣ್ಯ ಅತಿಥಿಗಳಿಗೆ ಹೃತ್ಪೂರ್ವಕ ಸ್ವಾಗತ!

ಕರಾವಳಿಯ ಹೆಮ್ಮೆಯ ಹುಲಿವೇಷ ಪರಂಪರೆ, ತುಳುನಾಡಿನ ಸಾಂಸ್ಕೃತಿಕ ವೈಭವ ಹಾಗೂ ಜನಪದ ಕಲೆಯ ಸಂಭ್ರಮವನ್ನು ವಿಶ್ವದ ಗಮನಕ್ಕೆ ತರುವ ಪಿಲಿ ನಲಿಕೆ ಸೀಸನ್–11ರ ವೇದಿಕೆಗೆ ಆಗಮಿಸುತ್ತಿರುವ ಗಣ್ಯ ಅತಿಥಿಗಳಾದ ಕ್ರಿಕೆಟ್ ತಾರೆ ಶ್ರೀ ದಿನೇಶ್ ಕಾರ್ತಿಕ್, ಒಲಿಂಪಿಕ್ ಪದಕ ವಿಜೇತ ಬಾಕ್ಸರ್ ಶ್ರೀ ವಿಜೇಂದರ್ ಸಿಂಗ್, ಖ್ಯಾತ ನಟ ಶ್ರೀ ಉನ್ನಿ ಮುಕುಂದನ್, ನಟ ಹಾಗೂ ನಿರ್ದೇಶಕ ಶ್ರೀ ರಿಷಬ್ ಶೆಟ್ಟಿ, ನಟ ಹಾಗೂ ನಿರ್ದೇಶಕ ಶ್ರೀ ರಾಜ್ ಬಿ. ಶೆಟ್ಟಿ ಮತ್ತು ಬಾಲಿವುಡ್‌ನ ಖ್ಯಾತ ನಟ, ಕರಾವಳಿಯ ಹೆಮ್ಮೆಯ ಶ್ರೀ ಸುನೀಲ್ ಶೆಟ್ಟಿ ಅವರು ಭಾಗವಹಿಸಲಿದ್ದಾರೆ.

ಖ್ಯಾತನಾಮರ ಉಪಸ್ಥಿತಿ, ಹುಲಿವೇಷದ ಅಬ್ಬರ ಹಾಗೂ ತುಳುನಾಡಿನ ಜನರ ಉತ್ಸಾಹದೊಂದಿಗೆ ಈ ಬಾರಿಯ ಪಿಲಿ ನಲಿಕೆ ಮತ್ತಷ್ಟು ಅದ್ದೂರಿಯಾಗಿ ಮೂಡಿಬರಲಿದೆ .

ಕಾರ್ಯಕ್ರಮದ ವಿವರಗಳು : ದಿನಾಂಕ: ಅಕ್ಟೋಬರ್ 20, 2026. ಸಮಯ: ಬೆಳಿಗ್ಗೆ 11ರಿಂದ ರಾತ್ರಿ 11ರವರೆಗೆ.

ಸ್ಥಳ: ಕರಾವಳಿ ಉತ್ಸವ ಮೈದಾನ, ಮಂಗಳೂರು.

ಆಯೋಜಕರು: ಮಿಥುನ್ ಎಂ. ರೈ ಅವರ ನೇತೃತ್ವದ ಪಿಲಿನಲಿಕೆ ಪ್ರತಿಷ್ಠಾನ, ನಮ್ಮ ಟಿವಿ ಸಹಯೋಗದೊಂದಿಗೆ.

ಪ್ರೇಕ್ಷಕರ ವ್ಯವಸ್ಥೆ : ಸುಮಾರು 30,000 ಜನರು ವೀಕ್ಷಿಸಬಹುದಾದ ಬೃಹತ್ ಪ್ರೇಕ್ಷಕರ ಟೆಂಟ್ ವ್ಯವಸ್ಥೆ ಮಾಡಲಾಗಿದೆ.

ಸ್ಪರ್ಧೆಯಲ್ಲಿ ಭಾಗವಹಿಸುವ 9 ತಂಡಗಳು :

ವೈದ್ಯನಾಥ ಫ್ರೆಂಡ್ಸ್, ಟ್ಯಾಲೆಂಟ್ ಟೈಗರ್ಸ್, ಎಂ.ಜಿ.ಟಿ. (ಮುಳಿಹಿತ್ಲು), ಜೂನಿಯರ್ ಬಾಯ್ಸ್ ಚಿಲಿಂಬಿ, ಫ್ರೆಂಡ್ಸ್ ಬಪ್ಪಾಲ್, ವೈ.ಎಫ್.ಸಿ. ಯೆಮ್ಮೆಕೆರೆ, ಎಸ್.ಎಫ್.ಸಿ. ಸೋಮೇಶ್ವರ, ಗೋರಕ್ಷನಾಥ ಹುಲಿ ಜೆಪ್ಪು, ಪೊಳಲಿ ಟೈಗರ್ಸ್ಸ್.

ಸ್ಪರ್ಧೆಯ ವಿಶೇಷತೆ : ಪ್ರತಿಯೊಂದು ತಂಡಕ್ಕೂ ಸಾಂಪ್ರದಾಯಿಕ ತಾಸೆ ವಾದನದ ತಾಳಕ್ಕೆ ತಕ್ಕಂತೆ ಹುಲಿ ವೇಷದ ಕುಣಿತ ಹಾಗೂ ತಮ್ಮ ಕಲಾ ಕೌಶಲ್ಯವನ್ನು ಪ್ರದರ್ಶಿಸಲು ತಲಾ 20 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ.

Related posts

ಅನುಪಮಾ ಗೌಡ ನಿರೂಪಣೆಗೆ ದೀಢಿರ್ ನಿವೃತ್ತಿ ದೀಢಿರ್ ನಿವೃತ್ತಿಗೆ ಕಾರಣವೇನು?

metromedia

Leave a Comment