32.5 C
ಮಂಗಳೂರು
September 18, 2026
Information

ಆಟಿ ಅಮಾವಾಸ್ಯೆ ಪ್ರಯುಕ್ತ ಕಷಾಯ ಕುಡಿಯೋಣ ಬನ್ನಿ, ಮೆಂತೆ ಗಂಜಿ ತಿನ್ನೋಣ ಕಾರ್ಯಕ್ರಮ

ಆಟಿ ಅಮಾವಾಸ್ಯೆ ಪ್ರಯುಕ್ತ ಕಷಾಯ ಕುಡಿಯೋಣ ಬನ್ನಿ, ಮೆಂತೆ ಗಂಜಿ ತಿನ್ನೋಣ ಕಾರ್ಯಕ್ರಮ

ಮಂಗಳೂರು : ತುಳುನಾಡು ಪ್ರತಿಷ್ಠಾನ ಮೂಲ್ಕಿ ಮತ್ತು ಕರ್ನಾಟಕ ಜಾನಪದ ಪರಿಷತ್ತು ದಕ್ಷಿಣ ಕನ್ನಡ ಜಿಲ್ಲಾ ಘಟಕದ ಜಂಟಿ ಆಶ್ರಯದಲ್ಲಿ ನಾಳೆ(ಆ.12) ಆಟಿ ಅಮಾವಾಸ್ಯೆ ಪ್ರಯುಕ್ತ ‘ಕಷಾಯ ಕುಡಿಯೋಣ ಬನ್ನಿ, ಮೆಂತೆ ಗಂಜಿ ತಿನ್ನೋಣ’ ಕಾರ್ಯಕ್ರಮವನ್ನು ಮಂಗಳೂರಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಬೆಳಿಗ್ಗೆ7 ರಿಂದ 10.30 ರವರೆಗೆ ಉಚಿತವಾಗಿ ಕಷಾಯ, ಮೆಂತೆ ಗಂಜಿ ಹಂಚುವ ವ್ಯವಸ್ಥೆ ಮಾಡಲಾಗಿದೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕ ವೇದವ್ಯಾಸ ಕಾಮತ್, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ, ಕರ್ನಾಟಕ ಜಾನಪದ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಪಮ್ಮಿ ಕೊಡಿಯಾಲ್ ಬೈಲ್, ತುಳುನಾಡು ಪ್ರತಿಷ್ಠಾನ ಮೂಲ್ಕಿಯ ಅಧ್ಯಕ್ಷ ರಾಜೇಶ್ ಅಮೀನ್, ರಾಜೇಶ್ ಸ್ಕೈಲಾರ್ಕ್, ಮಂದಾರ ರಾಜೇಶ್ ಭಟ್, ಮಹಮ್ಮದ್ ಅಸ್ಗರ್ , ಉಷಾ ರಾಜ್, ಸೌಮ್ಯ ಚರಣ್, ವಸಂತ್ ಅಂಚನ್, ರೇವತಿ ವಸಂತ್ ಇತರರು ಭಾಗವಹಿಸಲಿದ್ದಾರೆ.

Leave a Comment