November 17, 2026
Breaking News

ದೀಪಾವಳಿಯ ಬೆಳಕಿನಲ್ಲಿ ಪೌರಕಾರ್ಮಿಕರಿಗೆ ಗೌರವ – ನಂದನ್ ಮಲ್ಯ ಕುಟುಂಬದ ಮಾನವೀಯ ನಡೆ

ದೀಪಾವಳಿ ಸಂಭ್ರಮದಲ್ಲಿ ಪೌರಕಾರ್ಮಿಕರಿಗೆ ಆತಿಥ್ಯ

ನಂದನ್ ಮಲ್ಯ ಕುಟುಂಬದಿಂದ ಶ್ರಮಜೀವಿಗಳಿಗೆ ಗೌರವ ಸಮರ್ಪಣೆ

ಮಂಗಳೂರು: ದೀಪಾವಳಿ ಹಬ್ಬದ ಪ್ರಯುಕ್ತ ಬಿಜೆಪಿ ಯುವ ಮೋರ್ಚಾ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ನಂದನ್ ಮಲ್ಯ ಅವರ ಕುಟುಂಬವು ತಮ್ಮ ಬಡಾವಣೆಯಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಪೌರಕಾರ್ಮಿಕರನ್ನು ಮನೆಗೆ ಆಹ್ವಾನಿಸಿ, ಲಘು ಉಪಾಹಾರ ನೀಡಿ ಹಬ್ಬದ ಸಂಭ್ರಮವನ್ನು ಅವರೊಂದಿಗೆ ಹಂಚಿಕೊಂಡಿತು.

ಸಮಾಜದ ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ಕಾಪಾಡುವಲ್ಲಿ ಪೌರಕಾರ್ಮಿಕರ ಸೇವೆ ಅತ್ಯಂತ ಮಹತ್ವದ್ದಾಗಿದೆ. ಪ್ರತಿದಿನ ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುತ್ತಾ ಸಾರ್ವಜನಿಕರ ಆರೋಗ್ಯ ಮತ್ತು ಪರಿಸರದ ಸ್ವಚ್ಛತೆಗಾಗಿ ಶ್ರಮಿಸುವ ಅವರ ಸೇವೆಯನ್ನು ಗುರುತಿಸಿ ಗೌರವಿಸುವ ಸದುದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ನಂದನ್ ಮಲ್ಯ, “ನಮ್ಮ ಮನೆ ಮತ್ತು ಪರಿಸರ ಸ್ವಚ್ಛವಾಗಿರಬೇಕು ಎಂದು ಬಯಸುವ ನಾವು, ಅದಕ್ಕಾಗಿ ಪ್ರತಿದಿನ ಶ್ರಮಿಸುವ ಪೌರಕಾರ್ಮಿಕರ ಸೇವೆಯನ್ನು ಎಂದಿಗೂ ಮರೆಯಬಾರದು. ದೀಪಾವಳಿ ಕೇವಲ ದೀಪ ಬೆಳಗಿಸುವ ಹಬ್ಬವಲ್ಲ, ನಮ್ಮ ಬದುಕಿನಲ್ಲಿ ಬೆಳಕು ತುಂಬುವವರನ್ನು ಗೌರವಿಸುವ ಸಂದರ್ಭವೂ ಹೌದು. ಅವರ ಪರಿಶ್ರಮಕ್ಕೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ನಮ್ಮ ಕುಟುಂಬದೊಂದಿಗೆ ಈ ಸಂತೋಷವನ್ನು ಹಂಚಿಕೊಂಡಿದ್ದೇವೆ. ಸಮಾಜಕ್ಕಾಗಿ ದುಡಿಯುವ ಪ್ರತಿಯೊಬ್ಬರಿಗೂ ಗೌರವ ಮತ್ತು ಪ್ರೋತ್ಸಾಹ ನೀಡುವುದು ನಮ್ಮೆಲ್ಲರ ಜವಾಬ್ದಾರಿ” ಎಂದು ಹೇಳಿದರು.

ಹಬ್ಬದ ಸಂಭ್ರಮವನ್ನು ಸಮಾಜದ ಶ್ರಮಜೀವಿಗಳೊಂದಿಗೆ ಹಂಚಿಕೊಳ್ಳುವ ಮೂಲಕ ನಂದನ್ ಮಲ್ಯ ಕುಟುಂಬವು ಮಾನವೀಯತೆ, ಸಾಮಾಜಿಕ ಕಳಕಳಿ ಮತ್ತು ಕೃತಜ್ಞತೆಯ ಸಂದೇಶವನ್ನು ಸಾರಿತು.

Related posts

ದೀಪಾವಳಿಗೆ ಮುನ್ನ ಅಶಕ್ತ ಕುಟುಂಬದ ಬಾಳಲ್ಲಿ ಬೆಳಗಿದ ‘ತುಡರ್’ ದೀಪ

metromedia

ಬಂಟ್ವಾಳದಲ್ಲಿ ಮೆಟ್ರೋ ಮಾದರಿಯ ರೈಲು ನಿಲ್ದಾಣ ; ಪ್ರಧಾನಿ ಮೋದಿಯಿಂದ ಚಾಲನೆ!

metromedia

ಸೆಪ್ಟೆಂಬರ್ 27 ರಂದು ಕೇರಳದ ಕೊಚ್ಚಿಯಲ್ಲಿ ಕೇರಳ ಕರ್ನಾಟಕ ಜಾನಪದ ಉತ್ಸವ,ಕ್ರೀಡಾ ಅಂಕಣಕಾರ ಜಗದೀಶ್ಚಂದ್ರ ಅಂಚನ್ ಸೂಟರ್ ಪೇಟೆ ಅವರಿಗೆ ಸಾಧಕ ರತ್ನ ಪ್ರಶಸ್ತಿ 

metromedia

Leave a Comment